ಹರಿಹರ : ಪಂಚಮಸಾಲಿ ಪೀಠದಲ್ಲಿ ಜೆ.ಹೆಚ್. ಪಟೇಲ್ ಸ್ಮರಣೋತ್ಸವ

ಹರಿಹರ, ಡಿ. 12- ನಗರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಲಿಂ. ಜೆ.ಹೆಚ್. ಪಟೇಲ್ ಅವರ ಸ್ಮರಣೋತ್ಸವ ಕಾರ್ಯಕ್ರಮ ನಡೆಸಲಾಯಿತು. ಪಟೇಲ್ ಅವರ ಭಾವಚಿತ್ರಕ್ಕೆ ವಚನಾನಂದ ಶ್ರೀಗಳು ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಷಣ್ಮುಖಪ್ಪ, ಶಿವಾನಂದಪ್ಪ, ಶಿವಯೋಗಿ ಬಂಕಾಪುರ, ಶ್ರೀಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ, ಯುವ ಘಟಕದ ಸಂಘಟನಾ ಕಾರ್ಯದರ್ಶಿ ಬಿ.ಆರ್. ಕರಿಬಸಪ್ಪ, ಕು. ವೀಣಾ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!