ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಆವರಗೆರೆ ಗೋಶಾಲೆಯಲ್ಲಿ ಗೋ ಪೂಜೆ

ದಾವಣಗೆರೆ, ಡಿ.12- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್‌ ಅವರ ನೇತೃತ್ವದಲ್ಲಿ ವಿಧಾ ನಸಭೆಯ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಾಲಿಕೆ ಸದಸ್ಯರು ಹಾಗೂ ಅಧ್ಯಕ್ಷ ಆರ್.ಎಲ್.ಶಿವಪ್ರಕಾಶ್ ಅವರ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಆವರಗೆರೆ ಗೋಶಾಲೆಯಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಮ್ಮ ಗೋಪಿನಾಯ್ಕ್, ಬಿಜೆಪಿ ಮುಖಂಡರಾದ ಗೋಪಿ ನಾಯಕ್, ಪಿ.ಸಿ.ಶ್ರೀನಿವಾಸ್, ಗೌತಮ್ ಜೈನ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕಿರಣ್, ಗುರು, ಕಾರ್ಯ ದರ್ಶಿಗಳಾದ ಪ್ರಶಾಂತ್, ತಿಲಕ್, ಉತ್ತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್ ಹಾಗೂ ದಕ್ಷಿಣ ಯುವ ಮೋರ್ಚಾದ ಅಧ್ಯಕ್ಷ ರಾಕೇಶ್ ಭಜರಂಗಿ, ಪದಾಧಿಕಾರಿಗಳಾದ ಕಿರಣ್, ಕಿಶೋರ್ ಹಾಗೂ ಎಲ್ಲಾ ಮಂಡಲದ ಪದಾಧಿ ಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!