ದಾವಣಗೆರೆ, ಡಿ.12- ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಎರಡೂ ಸದನಗಳಲ್ಲಿ ಅಂಗೀಕರಿಸುವ ಮೂಲಕ ಸಮಸ್ತ ರೈತರಿಗೆ, ಕೃಷಿಗೆ ದ್ರೋಹವೆಸಗಿರುವುದಾಗಿ ಆರೋಪಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಕುಕ್ಕುವಾಡ ಗ್ರಾಮದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಪ್ರತಿಕೃತಿಗಳ ದಹಿಸುವ ಮೂಲಕ ನಿನ್ನೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಆರ್ ಕೆಎಸ್ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು, ಎಐಯುಟಿ ಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕುವಾಡ ಮಾತನಾಡಿ, ಕೃಷಿ ಜಮೀನು ಖರೀದಿ ಮೇಲೆ ಇದುವರೆಗೂ ಇದ್ದಂತಹ ಅಡೆತಡೆಗಳನ್ನು ಎಲ್ಲಾ ತೆಗೆದುಹಾಕಿ ಕೃಷಿ ಜಮೀನನ್ನು ಇನ್ನು ಮುಂದೆ ಕೃಷಿಕರಲ್ಲದವರು ಯಾರಾದರೂ ಖರೀದಿಸಬ ಹುದು ಹಾಗೂ ಖರೀದಿ ಮಿತಿಯನ್ನು 504 ಎಕರೆವರೆಗೂ ವಿಸ್ತರಿಸುವ ಮೂಲಕ ಕೃಷಿ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ.
ದೊಡ್ಡ ದೊಡ್ಡ ಕೃಷಿ ಫಾರ್ಮ್ ಗಳಿಗೆ ಅವಕಾಶ ನೀಡುವ ಮೂಲಕ ಜಮೀನು ಕಳೆದುಕೊಂಡ ರೈತರನ್ನು ಕೂಲಿ ಗುಲಾಮಗಿರಿಗೆ ತಳ್ಳಲು ಸರ್ಕಾರ ಹೊರಟಿದೆಯ ಲ್ಲದೇ, ರೈತರ ಬಾಳಿಗೆ ಮಣ್ಣು ಹಾಕಲು ಮುಂ ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಕುಕ್ಕುವಾಡ ಗ್ರಾಮದ ನಾಯಕರಾದ ಬಸವರಾಜಣ್ಣ, ಮಂಜಪ್ಪ, ಶಿವಕುಮಾರ್, ಅಜ್ಜಪ್ಪ, ಚಂದ್ರಗೌಡ, ಚಂದ್ರಶೇಖರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.