ಮಲೇಬೆನ್ನೂರು, ಡಿ.10 – ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಗುರುವಾರ ಮಲೇಬೆನ್ನೂರಿನಲ್ಲಿ ಬಿಜೆಪಿ ವತಿಯಿಂದ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು.
ಜಿ.ಪಂ. ಸದಸ್ಯ ಬಿ.ಎಂ.ವಾಗೀಶ್ಸ್ವಾಮಿ ಅವರು ಗೋ ಮಾತೆಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವುದನ್ನು ಸ್ವಾಗತ ಮಾಡುತ್ತೇವೆ. ಗೋ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದ್ದು ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈ ಜೋಡಿಸೋಣ ಎಂದು ವಾಗೀಶ್ಸ್ವಾಮಿ ಮನವಿ ಮಾಡಿದರು. ಪುರಸಭೆ ಸದಸ್ಯ ಬಿ.ಎಂ.ಚನ್ನೇಶ್ಸ್ವಾಮಿ, ಬಿಜೆಪಿ ತಾ.ಗ್ರಾ ಘಟಕದ ಪ್ರಧಾನ ಕಾರ್ಯದರ್ಶಿ ಆದಾಪುರದ ವೀರೇಶ್, ಬಿಜೆಪಿ ಮುಖಂಡರಾದ ಗೌಡ್ರ ಮಂಜುನಾಥ್, ಪಾನಿಪೂರಿ ರಂಗನಾಥ್, ಪಿ.ಕೆ. ಗಂಗಾಧರ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಬಿ. ಮಂಜ, ಸಿರಿಗೆರೆ ಶೇಖರಪ್ಪ, ಬನ್ನಿಕೋಡು ಹನುಮಂತಪ್ಪ, ನಾಗರಾಜಪ್ಪ, ಚಂದ್ರಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.