ದಾವಣಗೆರೆ, ಡಿ.10- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಟದ ವತಿಯಿಂದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಗೋ ಪೂಜೆಯನ್ನು ನಡೆಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ದಿವಾಕರ್, ಪ್ರಕೋಷ್ಟದ ಎ.ಸಿ.ರಾಘವೇಂದ್ರ, ಮಂಜುನಾಥ, ಅನಿತಾ, ಯುವ ಮೋರ್ಚಾ ಉಪಾಧ್ಯಕ್ಷ ಕಿರಣ, ಬೀಡಾ ನಾಗರಾಜ್, ತಿರುಮಲ್ಲೇಶ್, ಅಜೀರ್, ಪ್ರಕಾಶ್ ಅಲೂರು, ರಾಕೇಶ್, ಬಂಟಿ, ಎಸ್.ಮಂಜುನಾಥ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
January 10, 2025