ನ್ಯಾಮತಿ, ಡಿ.10- ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ಪೌಷ್ಠಿಕ ಕೈತೋಟ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ನೀಡಿರುವ ಜೀವಾಮೃತ ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಿ ಕೈತೋಟದ ಸದುದ್ಧೇಶವನ್ನು ಈಡೇರಿಸಬೇಕೆಂದು ಕರೆ ನೀಡಿದರು.
ರೈತ ಮಹಿಳೆಯರಿಗೆ ಹಳದಿ ಅಂಟು ಚೀಟಿ ಮತ್ತು ಬೇವಿನ ಪುಡಿಯನ್ನು ವಿತರಿಸಲಾಯಿತು. ರೈತ ಮಹಿಳೆಯರಾದ ಯಶೋದಮ್ಮ, ಗಾಯತ್ರಮ್ಮ, ಪಾರ್ವತಿ, ಶಿಲ್ಪ, ಹೇಮಾವತಿ, ಸಾಕಮ್ಮ ಇನ್ನಿತರರಿದ್ದರು.