ಬೇಸಿಗೆಯಲ್ಲಿ ಕಡಿಮೆ ನೀರು ಕೇಳುವ ಬೆಳೆಯನ್ನು ಬೆಳೆಯಿರಿ

ದಾವಣಗೆರೆ, ಡಿ.10 – ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ರಾಗಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು  ನಿಕ್ರಾ ಗ್ರಾಮದ ಅಗಸನಕಟ್ಟೆ ರೈತರಿಗೆ ಮಾಹಿತಿ  ನೀಡಿದರು. ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಮಾತನಾಡಿ, ಬೇಸಿಗೆಯಲ್ಲಿ ಕೊಳವೆ ಬಾವಿಯ ಮೂಲಕ ಬೆಳೆಯನ್ನು ಬೆಳೆಯುವ ರೈತರು ಕಡಿಮೆ ನೀರು ಕೇಳುವ ಬೆಳೆಗಳನ್ನು ಬೆಳೆಯುವುದು ಸೂಕ್ತ. ರಾಗಿಯಲ್ಲಿ ನವೀನ ತಳಿಯಾದ ಎಂಎಲ್ 365, ಬೇಸಿಗೆಯಲ್ಲಿ ಬೆಳೆಯುವುದು ಉತ್ತಮ ಎಂದು ಮಾಹಿತಿ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ 25 ರೈತ ಬಾಂಧವರಿಗೆ ಒಳಸುರಿ ಆದ ರಾಗಿ ಬೀಜವನ್ನು ಪ್ರಾತ್ಯಕ್ಷಿಕೆ ಅಂಗವಾಗಿ 50 ಎಕರೆ ಪ್ರದೇಶಕ್ಕೆ ರೈತರಿಗೆ ವಿತರಿಸಲಾಯಿತು.

error: Content is protected !!