ದಾವಣಗೆರೆ, ಡಿ.7 – ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲಾ ಬಾಸ್ಕೆಟ್‍ಬಾಲ್ ಕ್ಲಬ್ ವತಿಯಿಂದ ಮೊನ್ನೆ ಏರ್ಪಡಿಸಿದ್ದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
14 ಮತ್ತು 16 ವರ್ಷದ ಒಳಗಿನ ಬಾಲಕ, ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯ 4 ವಿಭಾಗಗಳಲ್ಲಿ ಭಾಗವಹಿಸಿದ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‍ನ ಕ್ರೀಡಾಪಟುಗಳು 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ, 16 ವರ್ಷದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು 14 ಮತ್ತು 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ತರಬೇತುದಾರರಾದ ಆರ್. ವೀರೇಶ್, ಆರ್. ದರ್ಶನ್ ಅವರು ಪ್ರಶಸ್ತಿ ಪಡೆದ ಬಾಲಕ-ಬಾಲಕಿಯರನ್ನು ಅಭಿನಂದಿಸಿದ್ದಾರೆ.