ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ನಗರದಲ್ಲಿ ಸೈಕಲ್ ಜಾಥಾ

ದಾವಣಗೆರೆ, ಡಿ.5- ಜಿಲ್ಲಾ ಪೊಲೀಸ್ ಮತ್ತು ಆರ್ ಟಿಓ ಇಲಾಖೆ ಜಂಟಿಯಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ನಗರದ ಜಯದೇವ ವೃತ್ತದಿಂದ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪೊಲೀಸ್ ಅಧೀಕ್ಷಕ ಹನುಮಂತರಾಯ ಅವರು ಸೈಕಲ್ ಸವಾರಿ ಮಾಡುವ ಮುಖೇನ ಜಾಥಾಕ್ಕೆ ಚಾಲನೆ ನೀಡಿದರು. ನಕಲಿಗೆ ಆಸೆಪಟ್ಟು ಅಸಲಿ ಕಳೆದುಕೊಳ್ಳದಿರಿ ಜೋಕೆ, ಮಕ್ಕಳ ಕಾನೂನು ಬಲು ಕಠಿಣ ಜೋಕೆ, ಎಲ್ಲಾ ಕಳೆದುಕೊಳ್ಳುವ ಮುನ್ನ ಪ್ರಜಾವಂತರಾಗುವುದು ಚನ್ನ, ದುರಾಸೆಯ ಸಹವಾಸ ಮನೆ-ಮಂದಿ ಉಪವಾಸ ಎಂಬಿತ್ಯಾದಿ ಅಪರಾಧ ಕುರಿತ ಮುನ್ನೆಚ್ಚರಿಕಾ ಸಂದೇಶದ ವಾಕ್ಯ ಗಳುಳ್ಳ ಫಲಕಗಳನ್ನು ಸೈಕಲ್ ನಲ್ಲಿ ಪ್ರದರ್ಶಿಸುತ್ತಾ ಜನ ಜಾಗೃತಿ ಮೂಡಿಸಲಾಯಿತು.

ಸೈಕಲ್ ಜಾಥಾದಲ್ಲಿ ಆರ್.ಟಿ.ಓ ಅಧಿಕಾರಿ ಶ್ರೀಧರ್, ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ಪ್ರಶಾಂತ್ ಜಿ. ಮುನ್ನೋಳಿ, ಪಿ.ಬಿ. ಪ್ರಕಾಶ್, ನರಸಿಂಹ ವಿ ತಾಮ್ರಧ್ವಜ, ಪೊಲೀಸ್ ನಿರೀಕ್ಷಕರುಗಳಾದ ಗಜೇಂದ್ರಪ್ಪ, ಗುರುಬಸವರಾಜ, ಸತೀಶ್ ಕುಮಾರ್, ಕಿರಣ್ ಕುಮಾರ್  ಮತ್ತಿತರರು ಭಾಗವಹಿಸಿದ್ದರು.

error: Content is protected !!