ಕರ್ನಾಟಕ ಜನಶಕ್ತಿಯಿಂದ ಅಂಬೇಡ್ಕರ್ ಸ್ಮರಣೆ

ದಾವಣಗೆರೆ, ಡಿ.6- ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ 64ನೇ ಪರಿನಿಬ್ಬಾಣ ದಿನಾಚರಣೆಯನ್ನು ನಗರದಲ್ಲಿ ಇಂದು ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ವತಿಯಿಂದ ಆಚರಿಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಅವರ ಸಾಧನೆ-ಜನಸ್ನೇಹಿ ಕಾರ್ಯಗಳನ್ನು ಸ್ಮರಿಸಲಾಯಿತು.

ಸಮಿತಿಯ ಸತೀಶ್ ಅರವಿಂದ್ ಮಾತನಾಡಿ, ಶೋಷಣೆ ವಿಮೋಚನೆಗಾಗಿ ಹಲವಾರು ಮಹನೀಯರು ಹೋರಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ನಾವು ಇಂದು ನೆನಪಿಸಿಕೊಳ್ಳಬೇಕಿರುವ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದು ತಿಳಿಸಿದರು. 

ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜದಲ್ಲಿರುವ ಜಾತಿ ಶೋಷಣೆ, ಅಸಮಾನತೆ, ಮೇಲು ಕೀಲುಗಳನ್ನು ಸ್ವತಃ ಅನುಭವಿಸಿರುವ ಅಂಬೇಡ್ಕರ್ ಅವರು ಜನರ ವಿಮೋಚನೆಗಾಗಿ ನಾಳೆಯ ಸಮಾನತೆಯ ಸಮಾಜಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಪ್ರಪಂಚದಲ್ಲಿಯೇ ಅತ್ಯುನ್ನತ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಕುಮಾರ್, ಬಸವರಾಜ, ಆದಿಲ್ ಖಾನ್, ಎಂ.ಡಿ. ಹಯಾತ್, ರೆಹಮತ್ ಉಲ್ಲಾ, ಫರ್ಹಾನ್ ಸೇರಿದಂತೆ ಇತರರು ಇದ್ದರು.

error: Content is protected !!