ದಾವಣಗೆರೆ, ಡಿ.3- ಮಹಾನಗರ ಪಾಲಿಕೆಯ 15ನೇ ವಾರ್ಡಿನ ಡಿ. ದೇವರಾಜ ಅರಸು ಬಡಾವಣೆ `ಎ’ ವಿಭಾಗದ 5ನೇ ತಿರುವಿನ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿ ಆರಂಭಗೊಂಡಿದೆ. ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರುಗಳು ಭೂಮಿ ಪೂಜೆಯನ್ನು ನೆರವೇರಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ ಮಲ್ಲೇಶಪ್ಪ, ಶ್ರೀಮತಿ ಸುಷ್ಮಾ ಪಾಟೀಲ್, ವಕೀಲರುಗಳಾದ ಶ್ರೀಮತಿ ವಸುಂಧರ, ಶ್ರೀಮತಿ ಅಮೀರಾಬಾನು, ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೆ.ಎಸ್. ಮಲ್ಲೇಶಪ್ಪ, ಸಾಮಾಜಿಕ ಸೇವಾ ಕಾರ್ಯಕರ್ತ ಕೆ.ಎಂ.ವೀರಯ್ಯ ಸ್ವಾಮಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಇ.ಎಂ. ಮಂಜುನಾಥ, ಮಂಜಪ್ಪ ಹಲಿಗೇರಿ, ಎಂ.ಸಿ.ಎಂ ತೀರ್ಥಪ್ಪ, ಅಬ್ದುಲ್ ಮಜೀದ್, ನಟರಾಜ್, ರಾಮಣ್ಣ, ಪರಮೇಶ್ವರಪ್ಪ, ಸುವರ್ಣಮ್ಮ, ಉಮಾಶಂಕರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.