ರಾಣೇಬೆನ್ನೂರು, ಡಿ.3-ಕೊಡಿಯಾಲ ಹೊಸಪೇಟೆಯ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 53 ದಿನಗಳ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಪುಟ್ಟಮ್ಮ ಹಿರೇಮಠ ಅವರು ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ ಅವರ ನೇತೃತ್ವದಲ್ಲಿ ಸಹ ಶಿಕ್ಷಕರುಗಳಾದ ಸಿ.ರೇಖಾ, ಶಿವಯ್ಯ ಹಿರೇಮಠ, ಎಸ್.ರೇಣುಕಮ್ಮ, ದೇವರಾಜ ಮಲ್ಲಾಪುರ, ಶಾಲೆಯ ಅಡುಗೆ ಸಿಬ್ಬಂದಿಗಳಾದ ಯಶೋದಮ್ಮ ಚಕ್ರಸಾಲಿ, ಅನಸೂಯಮ್ಮ ಹಾಲಮ್ಮನವರ್, ಗೀತಮ್ಮ ಗೋಣೆಪ್ಪನವರ್ ಆಹಾರ ಧಾನ್ಯಗಳನ್ನು ವಿತರಿಸಿದರು.
January 19, 2025