ಕನಕ ಯುವ ಪಡೆ : ಕನಕ ಜಯಂತಿ

ಹರಿಹರ, ಡಿ.3- ನಗರದ ಶ್ರೀ ಕನಕ ಯುವ ಪಡೆ ವತಿಯಿಂದ ಕನಕದಾಸರ ಜಯಂತಿ ಅಂಗವಾಗಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿದರು. ಈ ವೇಳೆ ಶಾಸಕ ಎಸ್ ರಾಮಪ್ಪ ಮತ್ತು ಕುರುಬ ಸಮಾಜದ ಅಧ್ಯಕ್ಷ ಕೆ.ಜಡಿಯಪ್ಪನವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಂದಿಗಾವಿ ಎನ್ ಹೆಚ್. ಶ್ರೀನಿವಾಸ್,  ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷ ಕೆ.ಅಣ್ಣಪ್ಪ, ನಗರಸಭೆ ಸದಸ್ಯ ವಸಂತ್, ಜಗದೀಶ್ ಚೂರಿ, ನೌಕರರ ಸಂಘದ ಅಧ್ಯಕ್ಷ ವಿಜಯಮಹಾಂತೇಶ್,  

ಶ್ರೀನಿವಾಸ್,ಉಮೇಶ್, ನಾಣಿ, ಅರ್ಜುನ್, ಆಟೋರಾಜ (ನಾಗರಾಜ), ವಿಜಯ್, ಮಂಜು, ಓಂಕಾರಿ, ರಾಘವೇಂದ್ರ, ರಾಜು ಪೈ, ಆದಿ, ಷಣ್ಮುಖ, ಸಿಂಗಾಡಿ ಮಂಜುನಾಥ್, ನಾಗರಾಜ್ ಬಂಡಿ ಹಾಗೂ ಇತರರು ಹಾಜರಿದ್ದರು.

error: Content is protected !!