ಕುಂಬಾರ ಸಮಾಜದ ಸಂಕಲ್ಪ ಯಾತ್ರೆ

ಹೊನ್ನಾಳಿ, ಡಿ.3-  ಕುಂಬಾರ ಸಮಾಜದ ಮುಖಂಡರು ಇಂದು ಸಮಾಜದ ಜನಜಾಗೃತಿ ಹಾಗೂ ಸಂಕಲ್ಪ ಯಾತ್ರೆಯ ವಾಹನವನ್ನು ಬರಮಾಡಿಕೊಂಡು ಮೆರವಣಿಗೆ ನಡೆಸಿದರು. ನಂತರ ನ್ಯಾಮತಿ ತಾಲ್ಲೂಕಿಗೆ ಯಾತ್ರೆಯನ್ನು ಬೀಳ್ಕೊಡಲಾಯಿತು. ರಾಜ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಶೆಟ್ಟಿ, ಕಾರ್ಯಾಧ್ಯಕ್ಷ ರಾಜಶೇಖರ ಕುಂಬಾರ, ಸಮಾಜದ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಪ್ರಮುಖರಾದ ಓಂಕಾರ, ಚಂದ್ರಪ್ಪ, ನಾಗರಾಜ್, ಗಿರೀಶ್, ಸುರೇಶ್‌, ಟೈಲರ್  ಬಸವರಾಜ್, ಗ್ಯಾಸ್‍ ಬಸಣ್ಣ, ಮಹಿಳಾ ಅಧ್ಯಕ್ಷರಾದ ಓಂಕಾರಮ್ಮ , ಶಾರದಮ್ಮ ಇನ್ನಿತರರಿದ್ದರು.

error: Content is protected !!