ರಾಣೇಬೆನ್ನೂರಿನ ರಾಜರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಏಡ್ಸ್ ದಿನಾಚರಣೆ

ರಾಣೇಬೆನ್ನೂರು, ಡಿ.3- ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಏಡ್ಸ್ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಸ್‌ಜೆಎಂವಿ ಮಹಿಳಾ ಮಹಾವಿದ್ಯಾಲಯದ ಡಾ. ಎಲ್. ಈಶ್ವರಪ್ಪ ಆಗಮಿಸಿದ್ದರು. ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ.ಎಂ.ಎನ್. ಸೂರಣಗಿ ಹಾಗೂ ಪ್ರೊ. ಎಸ್.ಬಿ. ಗುರ್ಜೇರ ಉಪಸ್ಥಿತರಿದ್ದರು. ಶ್ವೇತಾ ಮುದಿಗೌಡರ ಪ್ರಾರ್ಥಿಸಿದರು. ಪೂಜಾ ಹುಗ್ಗಿ ಸ್ವಾಗತಿಸಿದರು. ಶ್ವೇತಾ ರಾಮಪ್ಪ ವಂದಿಸಿದರು. ಭೂಮಿಕಾ ಪಟ್ಟಣಶೆಟ್ಟಿ ನಿರೂಪಿಸಿದರು.

error: Content is protected !!