ಕೊಟ್ಟೂರು, ಡಿ.2 – ಮಹಿಳೆಯರು ಮತ್ತು ಮಕ್ಕಳು ಗೌರಮ್ಮನಿಗೆ ಸಕ್ಕರೆ ಆರತಿ ಬೆಳಗಿದರು. ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಕೊಟ್ಟೂರು ಹಾಗೂ ಸುತ್ತ ಮುತ್ತಲಿನ ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ. ಮಹಿಳೆಯರಲ್ಲಿ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಹೆಣ್ಣು ಮಕ್ಕಳು ವಾರ ಪೂರ್ಣ ಹೊಸ ಸೀರೆ, ಉಡುಪು ಧರಿಸಿ ಸಂತಸದಿಂದ ಗೌರಿ ಹುಣ್ಣಿಮೆಯನ್ನು ಆಚರಣೆ ಮಾಡುತ್ತಾರೆ.
ಊರಿನ ಕೆಲ ಮನೆಗಳಲ್ಲಿ ಮಾತ್ರ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆಗಳಿಂದ ತಯಾರಿಸಿದ ಆರತಿ ಗೊಂಬೆಗಳಿಂದ ಆರತಿ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳ ತೀರದು. ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪವನ್ನು. ಪುಟ್ಟ ಪುಟ್ಟ ಮಕ್ಕಳು ದೀಪ ಹಚ್ಚಿಕೊಂಡು ಗೌರಮ್ಮನ ಮೂರ್ತಿಗೆ ಆರತಿಯನ್ನು ಬೆಳಗಿದರು.