ಹರಪನಹಳ್ಳಿ, ನ.28- ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲ್ಲೂಕು ಎಸ್ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋವಿಂದರಾಜ್ ಮಾತನಾಡಿ, ಸಂವಿಧಾನ ಡಾ. ಬಿ.ಆರ್. ಅಂಬೇಡ್ಕರ್ ನೀ ಡಿದ ಕೊಡುಗೆಯಾಗಿದೆ ಎಂದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಆರ್. ಹಾಲೇಶ್ ಮಾತನಾಡಿ, ಅಂಬೇಡ್ಕರ್ ಮಾನವ ಜನಾಂಗದ ಹಕ್ಕಿಗಾಗಿ ಹೋರಾಟ ಮಾಡಿದ ಅಗ್ರಗಣ್ಯ ನಾಯಕರಾಗಿದ್ದರು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಬ್ಯಾನಾಯಕ್, ತಾಲ್ಲೂಕು ಎಸ್ಸಿ ಮೋರ್ಚಾ ಉಪಾಧ್ಯಕ್ಷ ಭಂಗಿ ಚಂದ್ರಪ್ಪ, ಕಾರ್ಯದರ್ಶಿ ಡಿ. ಮಹಾಂತೇಶ್, ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಮುಖಂಡರಾದ ಮತ್ತಿಹಳ್ಳಿ ಶಿವಣ್ಣ, ಬಾಗಳಿ ಕೊಟ್ರೇಶ್, ಕಂಚಿಕೇರಿ ಕೆಂಚಪ್ಪ, ಕೊಟ್ರೇಶ್ ನಾಯ್ಕ ಇನ್ನಿತರರಿದ್ದರು.