ಹರಪನಹಳ್ಳಿ, ನ.29- ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಪ್ರಗತಿಪರ ಶಿಕ್ಷಕರ ಸಂಘಟನೆಯಿಂದ ಬಿ. ಚಂದ್ರಮೌಳಿ ಹಾಗೂ ಕ್ರಿಯಾಶೀಲ ಪ್ರಗತಿಪರ ಸಂಘಟನೆಯಿಂದ ಸಂಗಯ್ಯ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಡೆದ ಚುನಾವಣೆಯಲ್ಲಿ ಶಿಕ್ಷಕರ ಪ್ರಗತಿಪರ ಸಂಘಟನೆ ಅಭ್ಯರ್ಥಿಯಾಗಿದ್ದ ಬಿ. ಚಂದ್ರಮೌಳಿ ಅವರು 456 ಮತ ಪಡೆದು ಜಯಶೀಲರಾದರು. ಸಂಗಯ್ಯ 105 ಮತ ಪಡೆದು ಪರಾಭವಗೊಂಡರು.
ಹರಪನಹಳ್ಳಿ ತಾಲ್ಲೂಕು ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗ ಗೌಡ ಹಾಗೂ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನ ವರ್, ತಾಲ್ಲೂಕು ಶಿಕ್ಷಕರ ಸಂಘದ ಗೌರವಾಧ್ಯಕ್ಷ ದೇವೇಂದ್ರಗೌಡ, ಮಾದಿಹಳ್ಳಿ ಮಂಜಣ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಅಂಜಿನಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಸ್. ರಾಮಪ್ಪ, ಶಿಕ್ಷಕರ ಸಂಘದ ಕಾರ್ಯದರ್ಶಿ ಬಿ. ರಾಜಶೇಖರ, ಕೆ. ಹನುಮಂತಪ್ಪ, ಪದ್ಮರಾಜ ಜೈನ್, ಕಲಿವೀರ ಕಳ್ಳಿಮನಿ, ಎಮ್. ಪ್ರಭು ಮತ್ತಿತರರಿದ್ದರು.