ದಾವಣಗೆರೆ ನ.27 – ಕನಕ ವಿವಿಧೋದ್ಧೇಶ ಸಹಕಾರ ಸಂಘದ ಉಪಘಟಕದ 2ನೇ ಶಾಖೆ ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ ಯಲ್ಲಿ ಇಂದು ಪ್ರಾರಂಭಗೊಂಡಿತು. ಹದಡಿಯ ಚಂದ್ರಗಿರಿಮಠದ ಶ್ರೀ ಸದ್ಗುರು ಪರಮಹಂಸ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ದಾ – ಹ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗ ಳಾಗಿ ಪಾಲಿಕೆ ಸದಸ್ಯರಾದ ವೀರೇಶ್, ಉಮಾಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ, ವೃತ್ತ ನಿರೀಕ್ಷಕ ಮಧು, ದೇವನಗರಿ ಗ್ಯಾಸ್ ಏಜೆನ್ಸಿ ಮಾಲೀಕ ರುದ್ರಮುನಿಸ್ವಾಮಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಹೆಚ್.ನಾಗರಾಜ್ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಬಿ.ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
January 8, 2025