ಜಗಳೂರು, ನ.27- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಮುಷ್ಕರಕ್ಕೆ ಬೆಂಬಲಿಸಿ ಜೆಸಿಟಿಯು ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಡಾ.ನಾಗವೇಣಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿದ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಹಾಗೂ ಎಸ್ಎಫ್ಐ, ಎಐಎಸ್ಎಫ್ ನರೇಗಾ ಸಂಘಟನೆ ಮುಖಂಡರುಗಳು ಸರ್ಕಾರದ ವಿರುದ್ಧ ಘೊಷಣೆ ಹಾಕಿದರು.
ಈ ಸಂದರ್ಭದಲ್ಲಿ ಜೆಸಿಟಿಯು ಸಂಘಟನೆಗಳ ಮುಖಂಡರಾದ ಆರ್. ಓಬಳೇಶ್, ಮಹಮ್ಮದ್ ಭಾಷಾ, ವೀರಣ್ಣ, ಮಾದಿಹಳ್ಳಿ
ಕೆ. ಮಂಜಪ್ಪ, ಮಧು ತೊಗಲೇರಿ, ಅನಂತರಾಜ್, ಅಂಜಿನಪ್ಪ, ನೀಲಾ, ಶಿಲ್ಪಾ ಸತೀಶ್, ಎಂ. ರಾಜಪ್ಪ, ಸತ್ಯಮೂರ್ತಿ, ಸತೀಶ್, ಮಹಾಂತೇಶ್, ನರೇಗಾ ಸಂಘಟನೆಯ ಸುಧಾ ಸೇರಿದಂತೆ ಇತರರು ಉಪಸ್ಥಿತರಿದ್ದರು.