ಹರಿಹರದಲ್ಲಿ ಸಕಾಲ ಸಪ್ತಾಹ ಜಾಥಾಗೆ ಚಾಲನೆ

ಹರಿಹರ, ನ.27- ಸಕಾಲ ಸಪ್ತಾಹ ಜಾಥಾಗೆ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸಮಸ್ತ ನಾಗರಿಕರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು 7 ದಿನಗಳ ಒಳಗೆ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸಕಾಲ ಸಪ್ತಾಹವನ್ನು ಮಾಡುತ್ತಿದ್ದು, ಹೆಲ್ಪ್‌ ಡೆಸ್ಕ್ ಸಹ ತೆರೆಯುವ ಮೂಲಕ ನಾಗರಿಕರಿಗೆ ಉತ್ತಮವಾದ ಸೇವೆಯನ್ನು ಒದಗಿಸಲಾಗುತ್ತಿದೆ. ನಗರಸಭೆ, ಕಂದಾಯ, ಪೊಲೀಸ್, ತಾಪಂ ಇಲಾಖೆಗಳು ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಹ ಸಕಾಲ ಸಪ್ತಾಹ ಜಾಥಾವನ್ನು ಮಾಡುವ ಮೂಲಕ ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ನಗರಸಭೆ ಪೌರಾಯುಕ್ತ ಉದಯಕುಮಾರ್, ಆರೋಗ್ಯ ಇಲಾಖೆ ಉಮ್ಮಣ್ಣ, ಪ್ರಕಾಶ್, ಉಮೇಶ್, ಆನಂದ್, ಹೇಮಂತ್, ಕಿರಣ್,  ಸಂತೋಷ್, ಭೀಮೇಶ್, ಭಾರತಿ, ಸಂಗೀತಾ, ಕರಿಬಸಮ್ಮ, ಪುಷ್ಪ, ಎಲಿಜೆಬತ್ ರಾಣಿ, ನೇತ್ರಾವತಿ, ನರಸಮ್ಮ, ಲಕ್ಷ್ಮೀ ವೀಣಾ, ಸುವರ್ಣ, ಸೌಮ್ಯ, ಮಂಜುಳಾ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!