ದಾವಣಗೆರೆ, ನ.27- ಲೇಡಿಸ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ನಗರದ ಬಾಲಕರ ಬಾಲಮಂದಿರದ ಮಕ್ಕಳಿಗೆ ಟಿ-ಶರ್ಟ್‌ಗಳನ್ನು ಕೊಟ್ಟು, ಸಿಹಿ ಹಂಚಲಾಯಿತು. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ ಕುಮಾರ, ಸಂಸ್ಥಾಪಕರಾದ ಶ್ರೀಮತಿ ಅಮೀರಬಾನು, ರಾಜೇಶ್ವರಿ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ವಿನೋದ, ಚೇತನ್ ಶಿವಕುಮಾರ್, ಖಜಾಂಚಿ ಯಶೋದ, ಕೋ-ಆರ್ಡಿನೇಟರ್ ಸುಮ ಮಲ್ಲಿಕಾರ್ಜುನ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
January 19, 2025