ದಾವಣಗೆರೆ, ನ. 13- ನಗರದ ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ 32 ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ತರಬೇತಿಯಲ್ಲಿ ಎರಡು ವಿದ್ಯುತ್ ಚಾಲಿತ ವಾಹನಗಳನ್ನು ರಸ್ತೆಯ ಮೇಲೆ ದೈನಂದಿನ ಉಪಯೋಗಕ್ಕೆ ಬಳಸುವ ಹಾಗೆ ತಯಾರಿಸಿದ್ದಾರೆ.
ವಾಹನಗಳನ್ನು ಶ್ರೀಶೈಲ ವಿದ್ಯಾಸಂಸ್ಥೆಯ ಛೇರ್ಮನ್ ಜಿ.ಎಂ. ಲಿಂಗರಾಜು ಬಿಡುಗಡೆ ಮಾಡಿ, ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತಾ, ವಾಹನದ ವಿನ್ಯಾಸವನ್ನು ನೋಡಿ, ವಿದ್ಯಾರ್ಥಿಗಳಿಗೆ ಜನರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಸ್ಥಾಪಿಸುವ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು.
ವಿದ್ಯಾರ್ಥಿಗಳಿಗೆ ವಾಹನಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ ರೋವ್ ಲ್ಯಾಬ್ಸ್ ನ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಸನ್ಮಾಸಲಾಯಿತು. ವಿಭಾಗದ ಮುಖ್ಯಸ್ಥರಾದ ಡಾ. ಸಿ.ವಿ. ಶ್ರೀನಿವಾಸರವರು `ಸೆಂಟರ್ ಫಾರ್ ಮೊಬಿಲಿಟಿ ಇನ್ನೋವೇಷನ್’ ನ ಮಹತ್ವ ತಿಳಿಸಿದರು. ಸಹಾಯಕ ಪ್ರಾಧ್ಯಾಪಕ ಬಿ.ಸಿ. ದೊಡ್ಡೇಶಿ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಾಂಶುಪಾಲ ಡಾ. ವೈ ವಿಜಯ ಕುಮಾರ್ ಉಪಸ್ಥಿತರಿದ್ದರು.