ದಾವಣಗೆರೆ, ನ.12- ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರು, ಜಾನಪದ ವಿದ್ವಾಂಸರೂ ಆದ ಡಾ. ಎಂ.ಜಿ. ಈಶ್ವರಪ್ಪ ಅವರನ್ನು ವಿದ್ಯಾನಗರದ ಅವರ ನಿವಾಸದಲ್ಲಿ ದಾವಣಗೆರೆ ಜಿಲ್ಲಾ ಪತ್ರಿಕಾ ಮಾರಾಟಗಾರರ ಸಂಘದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಂಕಾಪುರ ರುದ್ರೇಶ್, ಟಿ.ಕೆ. ದಿನೇಶ್ ಬಾಬು, ಪಿ.ರಾಮಚಂದ್ರ ಶೆಟ್ರು, ಎ.ಎನ್. ಕೃಷ್ಣಮೂರ್ತಿ, ರಮೇಶ್ ಬಾಬು, ಬಿ.ಲೋಕೇಶ್, ಇ.ಮಂಜುನಾಥ್ ವಿದ್ಯಾನಗರ, ಪಿ. ಪ್ರಕಾಶ್, ಡಿ. ರವಿ, ಮತ್ತಿತರರು ಇದ್ದರು.