ಸಿಟಿ ಕೋ-ಆಪ್. ಬ್ಯಾಂಕ್‌ನ ವಾರ್ಷಿಕ ಮಹಾಸಭೆ

ದಾವಣಗೆರೆ, ನ.24- ನಗರದ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ 28ನೇ ವಾರ್ಷಿಕ ಮಹಾಸಭೆಯು ಶಿವಾಚಾರ್ಯ ನಿಕೇತನ ಹಿರೇಮಠದಲ್ಲಿ ನಡೆಯಿತು.

ಬ್ಯಾಂಕ್‌ ಅಧ್ಯಕ್ಷ ಎನ್.ಜೆ. ಗುರುಸಿದ್ಧಯ್ಯ ಸ್ವಾಗ ತಿಸಿದರು. ಸದಸ್ಯೆ ಜಿ.ಜೆ. ಜ್ಯೋತಿ ಪ್ರಾರ್ಥಿಸಿದರು. ಬ್ಯಾಂಕಿನ ವ್ಯವಸ್ಥಾಪಕ ಎನ್. ಮಂಜುನಾಥ್ ಹಿಂದಿನ ಮಹಾಸಭೆಯ ನಿರ್ಣಯಗಳನ್ನು ಓದಿದರು. ಹಿರಿಯ ನಿರ್ದೇಶಕ ಬಿ.ಹೆಚ್. ಪರಶುರಾಮಪ್ಪ, ಆಸ್ತಿ-ಜವಾಬ್ದಾರಿ ತಃಖ್ತೆ ಮಂಡಿಸಿದರು. ನಿರ್ದೇಶಕ ನಿರಂಜನ ನಿಶಾನಿಮಠ್ ಈ ಸಾಲಿನ ಆಯವ್ಯಯ ಮಂಡಿಸಿದರು.  

2020-21ನೇ ಸಾಲಿನ ಬ್ಯಾಂಕಿನ ಲೆಕ್ಕ ಪರಿಶೋಧನೆಯನ್ನು ಉಮಾಪತಯ್ಯ ಅವರಿಂದ ಮಾಡಿಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು. ಇದೇ ವೇಳೆ ಬ್ಯಾಂಕಿನ ಸದಸ್ಯರು ಮರಣ ಹೊಂದಿದಾಗ ಅವರ ನಾಮಿನಿಗೆ 5,000 ಮರಣ ಪರಿಹಾರ ನೀಡುವ ಕುರಿತು ತಿಳಿಸಲಾಯಿತು. ನಿರ್ದೇಶಕ ಎನ್.ವಿ. ಬಂಡಿವಾಡ ವಂದಿಸಿದರು.

error: Content is protected !!