ಮಲೇಬೆನ್ನೂರು, ನ.21- ಕೊಮಾರನಹಳ್ಳಿ ಗ್ರಾಮದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ ನೂತನ ಗೋಪುರಕ್ಕೆ ಶನಿವಾರ ಬೆಳಿಗ್ಗೆ ಮಕರ ರಾಶಿ ಮುಹೂರ್ತದಲ್ಲಿ ಕಳಸಾರೋಹಣ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಕಳಸಾರೋಹಣದ ಅಂಗವಾಗಿ ದೇವಸ್ಥಾನದಲ್ಲಿ ಹೋಮ, ಹವನ, ವಿಶೇಷ ಪೂಜೆ, ಅಭಿಷೇಕಗಳನ್ನು ಮೇಲುಕೋಟೆ ಟ್ರಸ್ಟಿನ ಯತಿರಾಜ್ ಅವರ ಶಿಷ್ಯ ವೃಂದದವರು ನೆರವೇರಿಸಿದರು.
ಪೂರ್ಣಾವತಿ ಸಲ್ಲಿಸಿದ ಮುಳುಬಾಗಿ ಲಿನ ಶ್ರೀ ಕೃಷ್ಣಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ರಾಯರು ನೂತನ ಗೋಪುರಕ್ಕೆ ಕಳಸಾರೋಹಣ ಮಾಡಿದರು.
ಕಳಸಾರೋಹಣದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶುಕ್ರವಾರ ಸಂಜೆ ಗ್ರಾಮದಲ್ಲಿ ಕುಂಭ ಮೇಳದೊಂದಿಗೆ ಕಳಸದ ಮೆರವಣಿಗೆ ನಡೆಯಿತು.
ಮಾಜಿ ಶಾಸಕ ಬಿ.ಪಿ. ಹರೀಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ತಾ. ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ನಿವೃತ್ತ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಶಾಸಕ ಎಸ್. ರಾಮಪ್ಪನವರ ಪುತ್ರ ಯತಿರಾಜ್, ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್, ರೈಸ್‌ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ನ್ಯಾಮತಿ ಚಂದ್ರಣ್ಣ, ಗ್ರಾಮದ ಜಿ. ಮಂಜುನಾಥ್ ಪಟೇಲ್, ಐರಣಿ ಅಣ್ಣಪ್ಪ, ದಾನಪ್ಳ ಹನುಮಂತಪ್ಪ, ಐರಣಿ ಪುಟ್ಟಪ್ಪ, ಎಸ್.ಎಂ. ಮಂಜುನಾಥ್, ಕೆ. ಯಲ್ಲಪ್ಪ, ಐರಣಿ ಭರಮಪ್ಪ, ಹುಗ್ಗಿ ರಂಗನಾಥ್, ಪರಮೇಶ್ವರನಾಯ್ಕ, ಜಗದೀಶ್‌ನಾಯ್ಕ ಕೊಪ್ಪದ ಸಿದ್ದಪ್ಪ, ಪುರೋಹಿತರಾದ ನಟರಾಜ್, ಸುರೇಶ್ ಶಾಸ್ತ್ರಿ, ಐರಣಿ ಮಹೇಶ್ವರಪ್ಪ, ನವೀನ್ ಪವೀನ್ ಪಟೇಲ್, ಸುನೀಲ್, ದೇವಸ್ಥಾನ ಸಮಿತಿ ಅಧ್ಯಕ್ಷ
ಜಿ. ರಂಗಪ್ಪ, ಖಜಾಂಚಿ ರೇವಣಸಿದ್ದಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.