ಜಿಲ್ಲೆಯ ಐವರು ಪೊಲೀಸರಿಗೆ ಸಿಎಂ ಪದಕ

ದಾವಣಗೆರೆ, ನ.19- ಪೊಲೀಸ್ ಇಲಾಖೆಯಲ್ಲಿ ಅತ್ಯು ತ್ತಮ ಸೇವೆಯನ್ನು ಪರಿಗಣಿಸಿ ನೀಡಲಾಗುವ 2017-18ರ ಮುಖ್ಯಮಂತ್ರಿ ಪದಕಕ್ಕೆ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು, ನ.20ರಂದು ಬೆಂಗಳೂರಿನ ವಿಧಾನಸೌಧದ ಬಳಿಯ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ಹೊನ್ನಾಳಿ ಸಿಪಿಐ ದೇವ ರಾಜ್, ಚನ್ನಗಿರಿ ಸಿಪಿಐ ಆರ್.ಆರ್. ಪಾಟೀಲ್, ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಡಿಸಿಐಬಿ ಮುಖ್ಯಪೇದೆ ಕೆ.ಸಿ. ಮಜೀದ್, ಡಿಎಆರ್ ಶ್ವಾನ ದಳದ ಕೆ.ಎಂ. ಪ್ರಕಾಶ್ ಇವರುಗಳನ್ನು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಅವರು ಆಯ್ಕೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ನೀಡಲಿದ್ದು, ಗೃಹ ಸಚಿವ ಬಸವ ರಾಜ ಬೊಮ್ಮಾಯಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಪದಕ ಸಾಧನೆಗೆ ಪಾತ್ರರಾದ ಪೊಲೀಸರಿಗೆ ಪೂರ್ವ ವಲಯ ಐಜಿಪಿ ಎಸ್. ರವಿ, ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಅಭಿನಂದಿಸಿದ್ದಾರೆ.

error: Content is protected !!