ಮುಂದುವರೆದ ಮಂಗನ ಹಾವಳಿ ಬಲೆಗೆ ಸಿಗದ ಹುಚ್ಚು ಮಂಗ

ಹೊನ್ನಾಳಿ, ನ.19-  ಹುಚ್ಚು ಮಂಗನ ಹಾವಳಿ ಮುಂದುವರೆದು ಎರಡು ದಿನಗಳಲ್ಲಿ ಹತ್ತಕ್ಕು ಹೆಚ್ಚು ಜನರಿಗೆ ಕಚ್ಚಿ ಹಾನಿ ಮಾಡಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಧರ್‌ ನೇತೃತ್ವದಲ್ಲಿ ಮಂಗನ ಹಿಡಿಯಲು ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಮುಂದಾದ ಘಟನೆ ನಡೆಯಿತು. ನಿನ್ನೆ ಇಡೀ ದಿನ ಅಧಿಕಾರಿಗಳು ಮಂಗನ ಹಿಡಿಯುಲು ಕಾರ್ಯ ಪ್ರವೃತ್ತರಾದರೂ ಹಿಡಿಯಲು ಸಾಧ್ಯವಾಗದೆ ಇರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಧರ್‌ ಮಾತನಾಡಿ, ಮಂಗನನ್ನು ಹಿಡಿಯಲು ಪ್ರಯತ್ನಿಸಿದ್ದು, ಪಂಚಾಯಿತಿ ಮುಖ್ಯಾಧಿಕಾರಿ ವೀರಭದ್ರಯ್ಯನವರೊಂದಿಗೆ ಪಂಚಾಯಿತಿಯ 20 ಪೌರ ಕಾರ್ಮಿಕರ ಹಾಗೂ ಅರಣ್ಯ ಸಿಬ್ಬಂದಿಗಳೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದರೂ ಹಿಡಿಯಲು ಸಾಧ್ಯವಾಗಿಲ್ಲ. ಇಂದು ಕೂಡ ನಾಲ್ಕೈದು ಜನಕ್ಕೆ ಕಚ್ಚಿ ಹಾನಿ ಮಾಡಿದೆ ಎಂದರು.

ಬೆಳಿಗ್ಗೆ ಹತ್ತು ಗಂಟೆಗೆ ದುರ್ಗಿಗುಡಿ ಉತ್ತರ ಭಾಗದಲ್ಲಿ ಕಾಣಿಸಿಕೊಂಡು ಕ್ರಮೇಣ ಕಲ್ಕೇರಿ, ಸಿದ್ದಪ್ಪನಕೆರೆ, ಸೊಪ್ಪಿನಕೇರಿ ದೊಡ್ಡಪೇಟೆ ಹೀಗೆ ಅನೇಕ ಕಡೆಸಾಗಿ 6 ಗಂಟೆಯ ನಂತರ ಕತ್ತಲಾಗಿದ್ದರಿಂದ ಹಳೆ ಸರ್ಕಾರಿ ಆಸ್ಪತ್ರೆ ಕಡೆ ಹೋಗಿ ಕಣ್ಮರೆಯಾಗಿದೆ. ನಾಳೆಯೂ ಈ ಕಾರ್ಯ ಮುಂದುವರೆಸುವುದಾಗಿ ಅವರು ವಿವರಿಸಿದರು. ಮಂಗನಿಂದ ಹಾನಿಗೊಂಡಿರುವವರು ಕುಂಕೊದ್ ಚನ್ನೇಶ್, ಅಮಾನುಲ್ಲಾ, ತಲಾದ್, ಕುಳ್‍ಮಲ್ಲಿಕಣ್ಣ, ಆತಿಫ್ ಹೀಗೆ ಅನೇಕರು ಹಾನಿಗೊಂಡು ಚಿಕಿತ್ಸೆ ಪಡೆದಿರುವರು. ಎರಡು ದಿನಗಳಿಂದ ಕೆಲವರು ರಾತ್ರಿ ಕೈಯಲ್ಲಿ ಬೆತ್ತ ಹಿಡಿದು ಒಡಾಡುತ್ತಿರುವುದು ಕಂಡುಬರುತ್ತಿದೆ.

error: Content is protected !!