ಟಿಪ್ಪುರವರ ಆದರ್ಶಗಳು ನಮಗೆ ಮಾರ್ಗದರ್ಶನ

ದಾವಣಗೆರೆ, ನ.13- ಟಿಪ್ಪು ಸುಲ್ತಾನ್‌ ರವರ ಆದರ್ಶಗಳು ನಮಗೆ ಮಾರ್ಗದರ್ಶನ ವಾಗಿವೆ ಎಂದು ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಾರ್ಗೆಟ್ ಅಸ್ಲಾಂ ತಿಳಿಸಿದ್ದಾರೆ.

ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್  ಜಯಂತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.  

ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಸರ್ವ ಸಮುದಾಯದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಶೌರ್ಯ, ಆದರ್ಶಗಳು ಇತಿಹಾಸದಲ್ಲಿ ಆಚ್ಚಳಿಯದೇ ಉಳಿದಿವೆ. ಟಿಪ್ಪುಸುಲ್ತಾನ್ ಅವರು ತಾಯಿ ಕನ್ನಡಾಂಬೆ ಭುವನೇಶ್ವರಿಯ ಪುತ್ರ ಎಂದು ಹೇಳಲು ನನಗೆ ಹೆಮ್ಮೆ ಯಾಗುತ್ತದೆ.  ಅವರಿಂದ ಯಾರಿಗೂ ತೊಂದರೆಯಾಗಿಲ್ಲ, ದಯವಿಟ್ಟು ಅವರ ಜಯಂತಿಯನ್ನು ಬಹಳ ಸರಳ ಹಾಗೂ ಶಾಂತಿಯ ಸಂಕೇತವಾಗಿ ಆಚರಿಸಲು ಮನವಿ ಮಾಡಿದರು

ನಮ್ಮ ಕನ್ನಡನಾಡಿನ ಕಲರವವನ್ನು ಹೊರ ದೇಶದವರೂ ಸಂಭ್ರಮಿಸುವಂತಾಗಬೇಕು. ಇಡೀ ನವೆಂಬರ್ ತಿಂಗಳು ಕನ್ನಡದ ಕಂಪನ್ನು ಪ್ರತಿಯೊಬ್ಬರೂ ಸಂಭ್ರಮವಾಗಿ ಸವಿಯಲಿ. ಆ ರೀತಿಯಲ್ಲಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ಎಂದರು.    

ಈ ವೇಳೆ ಯಾಕೂಬ್‌ ಕೊಟ್ಟೂರು, ಆಜಂ, ಚಮನ್ ಷರೀಫ್, ಅಬ್ದುಲ್ ಜಬ್ಬಾರ್, ಗೋವಿಂದ್‍ರಾವ್, ಬಿ.ಕೆ. ಅತಾವುಲ್ಲಾ ಷರೀಫ್, ಗಣೇಶ್, ನಜೀರ್‍ಸಾಬ್, ಚಾಂದ್‍ಪೀರ್, ಇಮ್ತಿಯಾಜ್, ಶೌಕತ್, ರಿಯಾಜ್ ಓಡಕಾಯ್ ಮತ್ತು ಇತರರು ಇದ್ದರು.

error: Content is protected !!