ಹರಪನಹಳ್ಳಿ, ನ.13- ದೇಶದಲ್ಲಿ ಮೊದಲ ಬಾರಿಗೆ ದಲಿತರಿಗೆ ಭೂಮಿ ವಿತರಿಸಿದ ರಾಜ, ಕನ್ನಂಬಾಡಿ ಯೋಜನೆಗೆ ನೀಲಿ ನಕ್ಷೆ ತಯಾರಿಸಿದ ಹರಿಕಾರ, ರಾಕೆಟ್ಗಳ ಜನಕ ಹಜರತ್ ಟಿಪ್ಪುಸುಲ್ತಾನ್ ಎಂದು ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಅಧ್ಯಕ್ಷ ಎ. ಮೂಸಾಸಾಬ್ ಹೇಳಿದರು.
ಪಟ್ಟಣದ 20 ನೇ ವಾರ್ಡ್ನಲ್ಲಿ ಸರಳವಾಗಿ ನಿನ್ನೆ ಜರುಗಿದ ಟಿಪ್ಪು ಸುಲ್ತಾನ್ರ 271 ನೇ ಜಯಂತೋತ್ಸವ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಪ್ರಥಮವಾಗಿ ರೇಷ್ಮೆ ಬೆಳೆಯನ್ನು ಪರಿಚಯಿಸಿ ರೈತರ ಆರ್ಥಿಕ ಮಟ್ಟದಲ್ಲಿ ಸುಧಾರಣೆ ತರಲು ನಿರ್ಧರಿಸಿದ ರಾಜ ಟಿಪ್ಪು, ಸರ್ವ ಧರ್ಮದ ಸಹಿಷ್ಣು ಹಾಗೂ ಪ್ರಜೆಗಳಿಗೆ ಉದಾರತೆ ತೋರಿದ ಭಾರತ ದೇಶದ ಭೂಪಟದಲ್ಲಿ ತನ್ನದೇ ಛಾಪು ಮೂಡಿಸಿದ ಪ್ರಭಾವ ಶಕ್ತಿಶಾಲಿ ವ್ಯಕ್ತಿಯಾಗಿದ್ದ. ಅವರ ಚಿಂತನೆ, ವಿಚಾರಗಳು ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದರು. ಷೇಶ್ಶಾವಲಿ, ಮೌಲಾನ ಅಜಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.