ಕ್ರಿಕೆಟ್ : ರಾಯಲ್ ಪ್ರಥಮ, ಡ್ಯಾನ್ಸ್ ಸೋಲೋ ದ್ವಿತೀಯ

ಸ್ವೇಟ್ ಪಾರ್ಕ್ ಫಿಟ್ನೆಸ್ ವತಿಯಿಂದ ಪಂದ್ಯಾವಳಿ

ದಾವಣಗೆರೆ, ನ. 12- ಇಲ್ಲಿನ ಪಿ.ಜೆ.ಬಡಾವಣೆಯ ಸ್ವೇಟ್ ಪಾರ್ಕ್ ಫಿಟ್ನೆಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ವೇಟ್ ಪಾರ್ಕ್‍ನ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದ್ದು, ರಾಯಲ್ ತಂಡ ಪ್ರಥಮ ಪ್ರಶಸ್ತಿ ಪಡೆದರೆ, ಡ್ಯಾನ್ಸ್ ಸೋಲೋ ತಂಡ ದ್ವಿತೀಯ ಸ್ಥಾನ ಪಡೆದಿದೆ.

ರಾಯಲ್ ತಂಡವನ್ನು ನಾಯಕ ರೂಪಿತ್ ನಾಗರಾಜ್ ಮುನ್ನಡೆಸಿದ್ದರೆ, ಡ್ಯಾನ್ಸ್ ಸೋಲೋ ತಂಡವನ್ನು ವಿಶು ಮಾಸ್ಟರ್ ಮುನ್ನಡೆಸಿದ್ದರು. 

ವಿಜೇತ ತಂಡಗಳಿಗೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಮಾಜಿ ಮೇಯರ್ ಶ್ರೀಮತಿ ರೇಖಾ ನಾಗರಾಜ್, ತರಬೇತುದಾರ ಅರುಣ ಬಹುಮಾನ ವಿತರಿಸಿದರು. 

error: Content is protected !!