ದಾವಣಗೆರೆ, ನ.12- ವಿಕಲಚೇತನರ ಗುರುತಿನ ಚೀಟಿ ಮತ್ತು ವಿಕಲಚೇತನರಿಗೆ ಇರುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಕಲ್ಪ ಸಂಸ್ಥೆ ವತಿಯಿಂದ ನಗರದ ಮಹಾರಾಜಪೇಟೆಯ ಶ್ರೀ ವಿಠಲ ಮಂದಿರದಲ್ಲಿ ಇಂದು ನಡೆಸಲಾಯಿತು. ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಜೆ. ಸುರೇಶ್, ಶಶಾಂಕ್ ಮಾತನಾಡಿದರು. ವಿಠಲ ಮಂದಿರದ ಮ್ಯಾನೇಜರ್ ಪ್ರಭಾಕರ್ ಭಾಗವಹಿಸಿದ್ದರು. ಹರೀಶ್ ವಂದಿಸಿದರು.
January 24, 2025