ಮಲೇಬೆನ್ನೂರು, ಆ.8- ಕೊರೊನಾ ವಾರಿಯರ್ಸ್‌ಗಳಿಗೆ ಮತ್ತು ನಿರ್ಗತಿಕರಿಗೆ ನೆರವು ನೀಡುತ್ತಿರುವ ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರು ಜಿಗಳಿ ಮತ್ತು ಭಾನುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರೊನಾ ವಾರಿಯರ್ಸ್‌ಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಕಿಟ್‌ಗಳನ್ನು ವಿತರಿಸಿದರು. ಭಾನುವಳ್ಳಿಯಲ್ಲಿ ಸೀಲ್‌ಡೌನ್ ಆಗಿರುವ ಪ್ರದೇಶದ ಬಡ ಜನರಿಗೆ ಫುಡ್‌ಕಿಟ್ ನೀಡಿದರು. ಈ ಸಂದರ್ಭದಲ್ಲಿ ಸಿರಿಗೆರೆ ಆರೋಗ್ಯ ವೈದ್ಯಾಧಿಕಾರಿ ಡಾ. ರೇಖಾ, ಕೇಂದ್ರದ ಪಿಡಿಓ ದಾಸರ ರವಿ, ಶಿಕ್ಷಕ ಡಿ.ಹೆಚ್. ನಾಗರಾಜ್, ಗ್ರಾ.ಪಂ. ಮಾಜಿ ಸದಸ್ಯ ಹರೀಶ್, ಬಿಲ್‌ಕಲೆಕ್ಟರ್ ಮೌನೇಶ್ ಮತ್ತಿತರರು ಹಾಜರಿದ್ದರು.
January 1, 2025