ಹೊನ್ನಾಳಿ, ನ.7- ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗ್ರಾಮಸ್ಥರು ಗುರು ನಮನ ಸಲ್ಲಿಸಿದರು. ನೊಳಂಬ ವೀರಶೈವ-ಲಿಂಗಾಯತ ಯುವ ವೇದಿಕೆಯ ಅಧ್ಯಕ್ಷ ಜೀನಹಳ್ಳಿ ಎಂ.ಬಿ. ಚನ್ನೇಶ್, ತಾ.ಪಂ. ಸದಸ್ಯ ಸಿ.ಆರ್. ಶಿವಾನಂದ್, ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಮಹೇಶ್ ಹುಡೇದ್, ತಾಲ್ಲೂಕು ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್, ಚನ್ನವೀರಪ್ಪ, ಹಿರೇಗೋಣಿಗೆರೆ ಗ್ರಾಮದ ನೊಳಂಬ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
December 28, 2024