ಹೆದ್ನೆ ಗ್ರಾಮದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ

ದಾವಣಗೆರೆ, ಜು.31- ಸಾವಯವ ಕೃಷಿ ಮಾಹಿತಿ ಮತ್ತು ತರಬೇತಿ ಕೇಂದ್ರ ವಿದ್ಯಾನಗರ ಹಾಗೂ ರಾಜ್ಯ ಕೃಷಿ ಅಭಿಯಾನ ಟ್ರಸ್ಟ್ ಯಲಹಂಕ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹೆದ್ನೆ ಗ್ರಾಮದ ಪ್ರಗತಿಪರ ಕೃಷಿಕಯ ಜಿಲ್ಲಾ ಹಾಗೂ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಹೆದ್ನೆ ಮುರುಗೇಶಪ್ಪನವರ ಹಣ್ಣು ಮತ್ತು ಅರಿಶಿಣ ತೋಟದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ರಾಜ್ಯ ಕೃಷಿ ಅಭಿಯಾನ ಟ್ರಸ್ಟ್ ನಿರ್ದೇಶಕ ದಿದ್ದಿಗೆ ಮಹದೇವಪ್ಪ ಮಾತನಾಡಿ, ಸಾವಯವ ಪಾರಂಪರಿಕ ಕೃಷಿಯು ಸತ್ಯದ ಕೃಷಿ. ಆದರೆ, ರಾಸಾಯನಿಕ ಕೃಷಿ ಉಗ್ರ ಕೃಷಿ ಎಂದರು. ಸಾವಯವ ಹಾಗೂ ಸಮಗ್ರ ಕೃಷಿಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರಿಂದ ಉತ್ತಮ ಲಾಭ ಮತ್ತು ಉತ್ಕೃಷ್ಟ ಆಹಾರ ಪಡೆಯುವುದರೊಂದಿಗೆ ಮಣ್ಣಿನ ಫಲವತ್ತತೆ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಈ ಭೂಮಿಯನ್ನು ವರ್ಗಾಯಿಸಿದರೆ ಅದು ಪುಣ್ಯದ ಕೆಲಸ ಎಂದರು.

ಮಣ್ಣಿಗೆ ಮರುಜೀವ ನೀಡುವ ಕಾರ್ಯಾಗಾರವು ಹೆದ್ನೆ, ಚಿತ್ರದುರ್ಗ  ತಾಲ್ಲೂಕಿನ ಚೀಳಂಗಿ, ಓಬವ್ವನಾಗ್ತಿಹಳ್ಳಿಯಲ್ಲಿ ನಡೆಯಿತು. ಹೆದ್ನೆ ಮುರುಗೇಶಪ್ಪ, ದಿನೇಶ್, ಹಾಲುವರ್ತಿ ಲೋಹಿತ್, ಹನುಮನಳ್ಳಿ ರಾಜೇಶ್, ಮಹಾಂತೇಶ್, ನಾಗರಾಜ್, ಗಿರೀಶ್ ಹಾಗೂ ಆಯ್ದ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

error: Content is protected !!