ಸುವರ್ಣ ಕರ್ನಾಟಕ ವೇದಿಕೆಯಿಂದ 65 ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ, ನ.3- ಸುವರ್ಣ ಕರ್ನಾಟಕ ವೇದಿಕೆಯಿಂದ 65ನೇ ಕನ್ನಡ ರಾಜ್ಯೋತ್ಸವವನ್ನು ನಿಟುವಳ್ಳಿಯ ಶ್ರೀ ರಾಜೇಶ್ವರಿ ಬಡಾವಣೆಯಲ್ಲಿ ಸರಳವಾಗಿ ಆಚರಿಸಲಾಯಿತು. 

ಧ್ವಜಾರೋಹಣವನ್ನು ವಕೀಲರಾದ ಮನೋಜ್‍ಕುಮಾರ್, ಪರಮೇಶ್ವರಪ್ಪ ಕುಂದೂರು ನೆರವೇರಿಸಿದರು. ಈ ಸಂದರ್ಭದಲ್ಲಿ ಪರಮೇಶ್ವರಪ್ಪ ಮಾತನಾಡಿ, ವರ್ಷಕ್ಕೆ ಒಮ್ಮೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಆದರೆ ಕೆಲವು ವಿದ್ಯಾವಂತರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ಹೋಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಹೆಚ್. ಪರಶುರಾಮ್ ರಾಜ್ಯ ಉಪಾಧ್ಯಕ್ಷರು, ಮಂಜುನಾಥ್ ಇ., ಶಿವು, ಶಾಂತ್‍ಕುಮಾರ್, ಕಣಿವೇಶ್, ಪರಮೇಶ್, ಆಕಾಶ್, ಅಪ್ಪು ಮತ್ತಿತರರು ಭಾಗವಹಿಸಿದ್ದರು.

error: Content is protected !!