ಮಲೇಬೆನ್ನೂರು, ಜು. 24- ನಾಗರ ಪಂಚಮಿ ಅಂಗವಾಗಿ ನಾಳೆ ಶನಿ ವಾರ ನಡೆಯ ಬೇಕಾಗಿದ್ದ ಹೋಬಳಿ ವ್ಯಾಪ್ತಿಯ ಎಲ್ಲಾ ಕಾರಣಿಕಗಳನ್ನು ಕೋವಿಡ್ ಕಾರಣದಿಂದಾಗಿ ತಹ ಶೀಲ್ದಾರ್ ಸೂಚನೆಯಂತೆ ರದ್ದುಪಡಿಸಲಾಗಿದೆ ಎಂದು
ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಹೇಳಿದರು. ಅವರು ಶುಕ್ರವಾರ ಜಿಗಳಿ ಗ್ರಾಮಕ್ಕೆ ಭೇಟಿ ನೀಡಿ, ಶನಿವಾರ ಶ್ರೀ ರಂಗನಾಥ ಸ್ವಾಮಿಯ ಕಾರಣಿಕ ಜಾತ್ರೆ ಮಾಡದಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.
January 22, 2025