ನ್ಯಾಮತಿಯ ರಾಮೇಶ್ವರದಲ್ಲಿ ಗುಚ್ಛ ಮುಂಚೂಣಿ ಪ್ರಾತ್ಯಕ್ಷಿಕೆ

ನ್ಯಾಮತಿ, ಅ.23- ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಗುಚ್ಛ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತೊಗರಿ ಬೆಳೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ತೊಗರಿ ಬೆಳೆಯಲ್ಲಿ ಪಲ್ಸ್ ಮ್ಯಾಜಿಕ್ ಬಳಕೆಯ ಕುರಿತು ತರಬೇತಿ ಕಾರ್ಯಕ್ರಮ ನಡೆಸಲಾಯಿತು. 

ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಮಾತನಾಡಿ, ಪಲ್ಸ್ ಮ್ಯಾಜಿಕ್ ಪ್ರಧಾನ ಪೋಷಕಾಂಶ ಹಾಗೂ ಲಘು ಪೋಷಕಾಂಶ ಮಿಶ್ರಣ. ಇದನ್ನು 10 ಗ್ರಾಂ ಹಾಗೂ ಸಸ್ಯ ಪ್ರಚೋದಕ 0.4 ಮಿ.ಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ತೊಗರಿಯಲ್ಲಿ ಶೇ. 50 ಹೂ ವಾಡುವ ಸಮಯದಲ್ಲಿ ಮೊದಲನೆಯ ಸಿಂಪರಣೆ ಮಾಡಬೇಕು ನಂತರ ಹದಿನೈದು ದಿನಗಳ ಅಂತರದಲ್ಲಿ ಇನ್ನೊಂದು ಸಿಂಪರಣೆ ಕೈಗೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಪಲ್ಸ್ ಮ್ಯಾಜಿಕ್ ವಿತರಿಸಲಾಯಿತು. ಕಾಯಿಕೊರಕದ ನಿಯಂತ್ರಣಕ್ಕಾಗಿ  ಮೋಹಕ ಬಲೆಗಳನ್ನು ಅಳವಡಿಸಬೇಕು ಎಂದು ಕೇಂದ್ರದ ವಿಸ್ತರಣಾ ತಜ್ಞರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಮಹೇಶ್, ಮಲ್ಲಿಕಾರ್ಜುನಪ್ಪ, ಸುರೇಶ್ ಹಾಗೂ ರೈತರು ಭಾಗವಹಿಸಿದ್ದರು.

error: Content is protected !!