ದಾವಣಗೆರೆ, ಸೆ.23- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರದ ಬಡ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡುವುದರ ಜೊತೆಗೆ ನೋಟ್ ಪುಸ್ತಕಗಳನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು. ದಾನಿಗಳಾದ ಆರ್.ಎಲ್. ಲಾ ಕಾಲೇಜಿನ ಸೋಮಶೇಖರಪ್ಪ ಮತ್ತು ಶ್ರೀಮತಿ ಶೈಲಜಾ, ಡಾ. ಎ.ಪಿ. ತಿಪ್ಪೇಸ್ವಾಮಿಯವರಿಗೆ ಕರುಣಾ ಟ್ರಸ್ಟ್ ಕೃತಜ್ಞತೆ ಸಲ್ಲಿಸಿದೆ. ದಯವಿಟ್ಟು ಇಂತಹ ಬಡ ವಿದ್ಯಾರ್ಥಿನಿಯರಿಗೆ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರೆಸಲು ದಾನಿಗಳು ಧನ ಸಹಾಯವಿತ್ತು ಸಹಕರಿಸಬೇಕಾಗಿ ವಿನಂತಿಸುತ್ತೇವೆ. ಸಂಪರ್ಕಿಸಿ. 9110455199.
January 10, 2025