ಹರಪನಹಳ್ಳಿ, ಜು.18- ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಿ, ಆಶಾ ಕಾರ್ಯಕರ್ತೆಯರು ತಾಲ್ಲೂಕಿನ ಹಾರಕನಾಳು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರತಿಭಟನೆ ನಡೆಸಿ, ವೈದ್ಯಾಧಿಕಾರಿ ಡಾ.ವಿಜಯ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಗೌರಿಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಬಿ.ವೀಣಾ ಮಾತ ನಾಡಿದರು. ತೊಗರಿಕಟ್ಟಿ ಗ್ರಾಮದ ಬಿ.ಸುವರ್ಣ, ಯಲ್ಲಾಪುರ ಗ್ರಾಮದ ಬಿ.ನಿರ್ಮಲ, ಅಲಮರಸೀಕೆರೆ ಗ್ರಾಮದ ಬಿ.ಲಕ್ಷ್ಮಮ್ಮ, ಗೌರಿಹಳ್ಳಿ ಗ್ರಾಮದ ದ್ರಾಕ್ಷಾಯಣಿ, ಹುಲಿಕಟ್ಟಿ ಗ್ರಾಮದ
ಡಿ.ಎಂ.ನಿರ್ಮಲ, ಟಿ.ರೇಣುಕಾ, ಕನ್ನಾಯಕನಹಳ್ಳಿ ಗ್ರಾಮದ ಕೆ.ಅಶ್ವಿನಿ, ಹಾರಕನಾಳು ಗ್ರಾಮದ ಪಿ.ಶಿಲ್ಪಾ, ಮಾದಾಪುರ ಗ್ರಾಮ ಎಂ.ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
December 24, 2024