ವೇತನ ಹೆಚ್ಚಳಕ್ಕೆ ಎನ್‌ಹೆಚ್ಎಂ ಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ, ಜು.18- ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಎನ್. ಹೆಚ್.ಎಂ ಗುತ್ತಿಗೆ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮೊನ್ನೆ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ರಾಜ್ಯದಲ್ಲಿ ಕೋವಿಡ್-19 ವೈರಸ್ ವಿರುದ್ದವಾಗಿ ಸುಮಾರು 27 ಸಾವಿರ ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಗುತ್ತಿಗೆ ನೌಕರರು ಯುದ್ದೋಪಾದಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಹಗಲು-ರಾತ್ರಿ ಎಂದು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 3500 ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದ್ದರೂ ಖಾಲಿ ಇರುವ ಸ್ಥಳಗಳಲ್ಲಿಯೂ ಹೆಚ್ಚುವರಿ ಕೆಲಸವನ್ನು ಮಾಡುತ್ತಿದ್ದು, ಯಾವುದೇ ಕೋವಿಡ್‍ನ ವಿಶೇಷ ಭತ್ಯೆ ಇಲ್ಲದೇ ಸೇವೆ ಸಲ್ಲಿಸುತ್ತಿದ್ದೇವೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು 8-10 ಸಾವಿರ ವೇತನ ಕೊಡುತ್ತಿದ್ದು, ಇಲ್ಲಿಯವರೆಗೆ ವೇತನ ಪರಿಷ್ಕರಣೆ ಮಾಡಲು ಕೂಡ ನಿರ್ಲಕ್ಷ್ಯ ತೋರಿದೆ ಹಾಗೂ ಕೆಲಸದ ಭದ್ರತೆ ಇರುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಈ ವೇಳೆ ಕೆ.ಹೆಚ್. ಆನಂದರಾಜು, ಸಾವಿತ್ರಿ, ಶೋಭ, ಮಧುಶ್ರೀ, ಪ್ರಶಾಂತ್, ಬಸವರಾಜ್, ಮಾಲತೇಶ್, ಸಂತೋಷ್, ಯೋಗೀಶ್, ಮೈನುದ್ಧೀನ್ ಖಾಜಾ, ಎಂ. ಚಿರಂಜೀವಿ ಇದ್ದರು.

error: Content is protected !!