ಹರಪನಹಳ್ಳಿ, ಅ.21 – ಈತ್ತೀಚೆಗೆ ಕೋವಿಡ್‍ಗೆ ಬಲಿಯಾದ ಅರಸಿಕೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ ಬಂದಿದೆ.
ಮೃತ ಪೇದೆಯ ಸ್ವಗ್ರಾಮ ಗೋವೇರಹಳ್ಳಿ ಗ್ರಾಮಕ್ಕೆ ತೆರಳಿದ ಶಾಸಕ ಜಿ.ಕರುಣಾಕರ ರೆಡ್ಡಿ ಅವರು 30 ಲಕ್ಷ ರೂ. ಪರಿಹಾರದ ಚೆಕ್ಕನ್ನು ವಿತರಣೆ ಮಾಡಿ, ಮೃತರಾದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿದಾಗ ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಆ ಪ್ರಕಾರ ಈಗ ಕೊಡಿಸಿದ್ದೇನೆ. ಈ ಹಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕುಟುಂಬದವರಿಗೆ ತಿಳಿಸಿದರು.
ರವಿ ಸಹೋದರಿ ರೇಖಾ ನಮ್ಮ ಕುಟುಂಬದ ಸಂಕಷ್ಟದ ಸ್ಥಿತಿಗೆ ಸ್ಪಂದಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲಾ ಎಸ್ಪಿಗಳಾದ ಹನುಮಂತರಾಯಪ್ಪ, ಸೈದುಲ್ಲಾ ಅಡಾವತ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ವೃತ್ತ ನಿರೀಕ್ಷಕ ಕೆ.ಕುಮಾರ್, ಅರಸಿಕೇರಿ ಹಾಗೂ ಹರಪನಹಳ್ಳಿ ಪಿಎಸ್ ಐಗಳಾದ ಕಿರಣಕುಮಾರ್ ಮತ್ತು ಪ್ರಕಾಶ್ ರವರಿಗೆ ಧನ್ಯವಾದ ತಿಳಿಸಿದರು.
ತಹಶೀಲ್ದಾರ್ ಅನಿಲ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಗೊಂದಿ, ಬಿಜೆಪಿ ತಾ. ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗ್ರಿಹಳ್ಳಿ ನಾಗರಾಜ್, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇ ಶಪ್ಪ, ಶಿರಗಾನಹಳ್ಳಿ ವಿಶ್ವನಾಥ, ಯು.ಪಿ.ನಾಗರಾಜ್, ಎಂ.ಸಂತೋಷ, ಹಾರಕನಾಳು ವೀರೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.