ರಾಣೇಬೆನ್ನೂರು ನಗರ ವಾಣಿಜ್ಯದ ಜೊತೆ ಧಾರ್ಮಿಕ ಕ್ಷೇತ್ರವೂ ಆಗಲಿ

ರಾಣೇಬೆನ್ನೂರು, ಅ.21 – ರಾಣೇಬೆನ್ನೂರು ನಗರ ಪ್ರಸಿದ್ದ ವಾಣಿಜ್ಯ ನಗರವಷ್ಟೇ  ಅಲ್ಲ  ಧಾರ್ಮಿಕ ಕೇಂದ್ರವೂ ಆಗುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಲ್ಲಿನ ಮೆಡ್ಲೇರಿ ರಸ್ತೆಯಲ್ಲಿ ದಿಂಡದಹಳ್ಳಿ ಶಾಖಾ ಮಠದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ರಾಣೇಬೆನ್ನೂರಿನಲ್ಲಿ ಧರ್ಮವಂತರು, ದಾನಿಗಳು ಹೆಚ್ಚು ಇರುವುದರಿಂದ ಮಠ-ಮಂದಿರಗಳು ನಿರ್ಮಾಣವಾಗುತ್ತಿದ್ದು, ಇದು ಇಲ್ಲಿನ ಜನರ ಆರೋಗ್ಯಕರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ ರಾಘವೇಂದ್ರ, ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮಠದ ಅಭಿವೃದ್ಧಿಗೆ ಸಹಾಯ ಮಾಡುತ್ತೇನೆಂದರು.

ದಿಂಡದಹಳ್ಳಿಯ ಮಠದ 8 ಶಾಖೆಗಳು ಇವೆ. ಅವೆಲ್ಲವುಗಳಿಗೂ ರಾಣೇಬೆನ್ನೂರಿನ ಶಾಖಾ ಮಠ ಎಲ್ಲ ರೀತಿಯಿಂದಲೂ ಮಧ್ಯವರ್ತಿ ಆಗಲಿದೆ. ಇಲ್ಲಿ ನವದುರ್ಗೆಯರ ಹಾಗೂ ನಾಗ ದೇವತೆ ಮಂದಿ ರಗಳ ಜೊತೆ ಗುರು ನಿವಾಸವನ್ನು ನಿರ್ಮಿಸಲಾಗು ವುದು ಎಂದು ಸಾನ್ನಿಧ್ಯ ವಹಿಸಿದ್ದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು. 

ಉಗ್ರಾಣ ನಿಗಮದ ಅಧ್ಯಕ್ಷ ಉಜನೇಶ ಬಣ ಕಾರ, ಶಾಸಕ ಆರ್. ಶಂಕರ್,  ಮುಖಂಡರುಗಳಾದ ಸಂತೋಷ ಪಾಟೀಲ, ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಬಸವರಾಜ ಹುಲ್ಲತ್ತಿ, ಬಸವರಾಜ ಪಾಟೀಲ ಮತ್ತಿತರರು ಭಾಗವಹಿಸಿದ್ದರು.  

error: Content is protected !!