ದಾವಣಗೆರೆ, ಅ.20- ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ‘ನನ್ನ ಮಾಸ್ಕ್ ನನ್ನ ಲಸಿಕೆ’ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಅಶ್ವಿನ್ ಕುಮಾರ್ ಮತ್ತು ಅಪರಾಧ ವಿಭಾಗದ ಪಿಎಸ್ ಐ ಎಂ. ಪಾಷಾ ಹಾಗೂ ಸಿಬ್ಬಂದಿಗಳಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಬದಲು ಮಾಸ್ಕ್ ಅನ್ನು ನೀಡುವ ಮೂಲಕ ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ನಂತರ ಆನಗೋಡು ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ನರಸಿಂಹ ವಿ. ತಾಮ್ರಧ್ವಜ, ಪ್ರಸ್ತುತವಾಗಿ ಕೋವಿಡ್-19 ರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಇಲಾಖಾ ವತಿಯಿಂದ ಇಆರ್ ಎಸ್ ಎಸ್ ‘112’ ಹಾಗೂ ‘ಕರುಣಾಳು ವ್ಯಕ್ತಿ’ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು.