ದಾವಣಗೆರೆ, ಜು.14- ನಗರದ ಡಿ. ದೇವರಾಜ ಅರಸು ಬಡಾವಣೆಯಲ್ಲಿ ಸೂಕ್ತ ಸ್ಥಳವನ್ನು ಹುಡುಕಿ, ಅರಸು ಅವರ ಪುತ್ಥಳಿಯನ್ನು ಸ್ಥಾಪಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಾಡಿಗಾಗಿ ದುಡಿದ ಮಹಾನ್ ಪುರುಷರ ಪುತ್ಥಳಿಯನ್ನು ಸ್ಥಾಪಿಸದಿರುವುದು ಬೇಸರ ಮೂಡಿಸುತ್ತದೆ. ಅವರಿಗೆ ಗೌರವ ಸಲ್ಲಿಸುವ ಪರಿ ಇದಲ್ಲ. ಕೂಡಲೇ ಸೂಕ್ತ ಜಾಗ ಹುಡುಕಿ ಪುತ್ಥಳಿ ಸ್ಥಾಪನೆಗೆ ಮುಂದಾಗುವಂತೆ ಅಸಂಘಟಿತ ಕಾರ್ಮಿಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ಹರೀಶ್, ಬಾಷಾ ಆರ್.ಬಿ. ಝಡ್. ಜಬ್ಬಾರ್, ಪ್ರವೀಣ್, ಮುಜಾಹಿದ್, ಸುಹೀಲ್, ಎಂ.ಕೆ. ಫಾರೂಕ್, ಭಕ್ಷಿ ಇನ್ನಿತರರು ಮನವಿ ಸಲ್ಲಿಸಿದ್ದಾರೆ.