ಬಿಸಿಯೂಟ ತಯಾರಿಸುವ ಕಾರ್ಮಿಕರಿಗೆ ವೇತನ ನೀಡಿ

ಹರಿಹರ, ಆ. 10- ಹರಿಹರ ತಾಲ್ಲೂಕಿನ ಬಿಸಿ ಊಟ ತಯಾರಿಸುವ ಕಾರ್ಮಿಕರಿಗೆ ಕೂಡಲೇ 3 ತಿಂಗಳ ವೇತನವನ್ನು ನೀಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ನವರಿಗೆ ಎಐಟಿಯುಸಿ ವತಿಯಿಂದ ಮನವಿ ಅರ್ಪಿಸಲಾಯಿತು.

ಈ ವೇಳೆ ಮುಖಂಡ ಆವರಗೆರೆ ಚಂದ್ರು ಮಾತನಾಡಿ, ಕನಿಷ್ಠ ವೇತನದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲೂ ಸಹ ಸರ್ಕಾರ 3 ತಿಂಗಳಿಂದ ವೇತನ ಬಿಡುಗಡೆ ಮಾಡದಿರುವುದರಿಂದ  ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ತಾಲ್ಲೂಕಿನ 140  ಕಾರ್ಮಿಕರಿಗೆ 39 ಲಕ್ಷ ರೂ.ಗಳು ಬಿಡುಗಡೆ ಆಗಿತ್ತು. ಆದರೆ, ಕಾರಣಾಂತರದಿಂದ ತಡವಾಗಿದ್ದು, ಸೋಮವಾರದ ವೇಳೆಗೆ ವೇತನ  ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಲೆಕ್ಕಧಿಕಾರಿ ಲಿಂಗರಾಜ್, ಸರೋಜಾ, ಜ್ಯೋತಿ ಲಕ್ಷ್ಮಿ, ಪ್ರಮೀಳಾ, ಗದಿಗೇಶ್ ಪಾಳೇದ್, ಮಂಗಳ ಗೌರಮ್ಮ, ಹೊನ್ನಮ್ಮ, ವಿಶಾಲಾಕ್ಷಮ್ಮ, ಸುನೀತಾ, ಉಷಾ, ಸೌಭಾಗ್ಯ, ಗಂಗಮ್ಮ, ನೀಲಮ್ಮ, ಎನ್.ಜಿ. ರಾಜೇಶ್ವರಿ, ಗೀತಾ, ರೇಣುಕಾ, ಭಾಗ್ಯಮ್ಮ, ಕಾವೇರಿ, ರೇಖಾ, ಸುನಿತಾ ಮಂಜುಳಾ, ಸುಶೀಲಮ್ಮ, ಗಾಯತ್ರಿ, ಭಾಗ್ಯ ಇತರರು ಹಾಜರಿದ್ದರು.

error: Content is protected !!