ನಗರದಲ್ಲಿ ವಿಶೇಷ ರಿಯಾಯಿತಿ ಮಾರಾಟ ಮುಂದುವರಿಕೆ

ದಾವಣಗೆರೆ, ಅ.8 – ನಗರದ ತೊಗಟವೀರ ಸಮುದಾಯ ಭವನದಲ್ಲಿ ಆಕರ್ಷಕ ಉಡುಪುಗಳ ಭಾರೀ ರಿಯಾಯಿತಿ ಹಾಗೂ ಮಾರಾಟವು 3 ರಿಂದ ನಡೆಯುತ್ತಿದ್ದು ದಿನಾಂಕ 10ಕ್ಕೆ ಮುಕ್ತಾಯವಾಗುತ್ತಿತ್ತು, ಆದರೆ ಗ್ರಾಹಕರ ಅನುಕೂಲಕ್ಕಾಗಿ ಈ ಮಾರಾಟವನ್ನು ಅಕ್ಟೋಬರ್ 14ರವರೆಗೆ ಮುಂದುವರೆಸಲಾಗಿದೆ.

ಕೊರೊನಾ ಕಾರಣದಿಂದಾದ ಲಾಕ್‍ಡೌನ್‍ನಿಂದಾಗಿ ಜನರು ಆನ್‍ಲೈನ್ ಶಾಪಿಂಗ್ ಮೊರೆ ಹೋಗಿರುವ ಕಾರಣ ಬಟ್ಟೆ ಕಾರ್ಖಾನೆಗಳಲ್ಲಿ ದಾಸ್ತಾನು ಬಾಕಿ ಉಳಿದಿದ್ದು, ಅದನ್ನು ಅತಿ ಕಡಿಮೆ ಬೆಲೆಯಲ್ಲಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ವಿವಿಧ ಪ್ರಕಾರದ ಮಹಿಳೆಯರ ಮತ್ತು ಪುರುಷರ ಉಡುಪುಗಳು, ಮಕ್ಕಳ ಬಟ್ಟೆಗಳು, ಶರ್ಟ್, ಟಿ-ಶರ್ಟ್, ಪ್ಯಾಂಟ್, ಟಾಪ್, ವೆಸ್ಟರ್ನ್ ಬಟ್ಟೆ, ಕುರ್ತಾ ಮುಂತಾದ ವಿವಿಧ ವಿನ್ಯಾಸಗಳ ಬಟ್ಟೆಗಳು ಲಭ್ಯವಿವೆ. ಕೇವಲ 200-350 ರೂ.ಗೆ ಸಿಗಲಿದೆ. ಎಲ್ಲಾ ರೀತಿಯ ಬಟ್ಟೆಗಳಿಗೂ ಬೇರೆ ಬೇರೆ ಕೌಂಟರ್‍ಗಳಿವೆ.

ಹೆಣ್ಣುಮಕ್ಕಳ ಬ್ರಾಂಡೆಡ್ ಒಳ ಉಡುಪುಗಳು ಕೇವಲ 50 ರೂನಲ್ಲಿ, ಕಾಟನ್, ಲೆನಿನ್, ಜಾರ್ಜೆಟ್, ಶಿಫಾನ್, ಸೀರೆಗಳು, 150ರೂ ನಿಂದ 250ರವರೆಗೆ ಹಾಗೂ ರಾಜಸ್ಥಾನಿ, ಡಿಸೈನರ್ ಮತ್ತು ಇತರೆ ವಿಧದ ಕುರ್ತಾಗಳು ಕೇವಲ 450 ರಿಂದ 600 ರೂಗಳಲ್ಲಿ ದೊರೆಯಲಿವೆ.

error: Content is protected !!