ಮಾದಕ ವ್ಯಸನ, ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ

ದಾವಣಗೆರೆ, ಜು.2- ಅಂತರರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶನದಂತೆ ಫೇಸ್‌ಬುಕ್ ಖಾತೆಯಲ್ಲಿ ಲೈವ್ ವೀಡಿಯೋ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಪಿ.ಡಿ. ಮುರಳೀಧರ್ ಅವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಗಂಗಂ ಸಿದ್ಧಾರೆಡ್ಡಿ ಮಾಹಿತಿ ನೀಡಿದರು.

ಭಾರತದಲ್ಲಿ ಶೇ.22 ಜನ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆಯೂ ತಂಬಾಕು ಬಳಕೆಗೆ ಹೆಚ್ಚಿನದಾಗಿ ಒಳಗಾಗುತ್ತಿದ್ದಾರೆ.  – ಡಾ. ಗಂಗಂ ಸಿದ್ಧಾರೆಡ್ಡಿ, ಮನೋ ವೈದ್ಯ

ಭಾರತದಲ್ಲಿ ಶೇ.22 ಜನ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆಯೂ ತಂಬಾಕು ಬಳಕೆಗೆ ಹೆಚ್ಚಿನದಾಗಿ ಒಳಗಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್ 26 ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಬಾರಿಯ ಘೋಷವಾಕ್ಯ ಉತ್ತಮ ಜ್ಞಾನದಿಂದ ಉತ್ತಮ ಆರೈಕೆ ಎಂದರಲ್ಲದೆ, ಮಾದಕ ವ್ಯಸನ ಹೇಗೆ ಆರಂಭವಾಗುತ್ತದೆ, ಅದರ ದುಷ್ಪರಿಣಾಮಗಳೇನು, ಯಾವ ರೀತಿ ಚಿಕಿತ್ಸೆ ನೀಡಲಾಗುವುದು ಇತ್ಯಾದಿಗಳ ಕುರಿತು ಸುದೀರ್ಘ ಮಾಹಿತಿಯನ್ನು ಡಾ. ಗಂಗಂ ಸಿದ್ಧಾರೆಡ್ಡಿ ನೀಡಿದರು.

error: Content is protected !!