ಮಲೇಬೆನ್ನೂರು, ಜು.2- ಹೊಳೆಸಿರಿಗೆರೆ ಗ್ರಾಮದ ಎಫ್ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಕುರಿತು ಮಾಹಿತಿ ನೀಡಿ, ಮೊಟ್ಟೆ ವಿತರಿಸಲಾಯಿತು. ಇದೇ ವೇಳೆ ವೈದ್ಯಾಧಿಕಾರಿ ಡಾ. ರೇಖಾ ಅವರನ್ನು ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಚಿದಾನಂದ್, ಗ್ರಾ.ಪಂ. ಸದಸ್ಯ ಕೆ. ಹಾಲೇಶ್, ಆಶಾ ಕಾರ್ಯಕರ್ತೆ ಮಾಲಾಶ್ರೀ, ಎಫ್ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಾಂತ ಬಿ. ಪಾಟೀಲ್ ಇನ್ನಿತರರು ಭಾಗವಹಿಸಿದ್ದರು.
February 25, 2025