ಹರಿಹರ, ಅ. 3- ದೇಶದ ಸೈನಿಕನಾಗಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಗರಕ್ಕಾಗಮಿಸಿದ ಯೋಧ ಪಿ.ಎನ್. ಪ್ರಕಾಶ್ ಅವರಿಗೆ ನಗರದ ಸೈನಿಕ ಯುವಕರ ಬಳಗದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು, ನಗರದ ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹೆಚ್. ಶಿವಪ್ಪ ವೃತ್ತ, ಹಳೇ ಪಿ.ಬಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತುಕಾರಾಂ ಲಮಾಣಿ, ವಿಜಯ್, ಇಂದ್ರಜಿತ್, ಮಹೇಶ್, ಗುಣ, ನವೀನ್, ಭಾರತ್, ರಾಜು, ದೇವರಾಜ್, ಮಧು, ದುರುಗೇಶ್, ಮಂಜುನಾಥ್, ಗೌತಮ್, ಸುಶೀಲಮ್ಮ, ಪ್ರಿಯಾಂಕಾ, ವಿದ್ಯಾ, ಕೃಷ್ಣ, ಹನುಮಂತ ಹಾಗು ಇತರರು ಉಪಸ್ಥಿತರಿದ್ದರು.